ಬರ್ಸ ಇನಿ ಬರ್ವ? ಒಂತೆ
ಮುಗಾಲ್ ಉಂಡು .ಒರ ಬೊಳ್ಳ
ಬತ್ತ್ ದ್ ಪೋಂಡು…. ಇದು
ನನ್ನೂರಿನ ಪರಿಸರದಲ್ಲಿ ನನ್ನ ಕಿವಿಗೆ ಬಿದ್ದಿರುವ
ಮಾತುಕತೆಯ ತುಣುಕು .ಮಂಗಳೂರು ಸೇರಿದಂತೆ
ತುಳುನಾಡಿನ ಬಹುತೇಕ ಕಡೆಗಳಲ್ಲಿ ನೀರಿಲ್ಲದೆ
ಪರದಾಡುವುದನ್ನು ನೋಡುತ್ತಿದ್ದೇವೆ .ನಾನು ನಮ್ಮ ಮನೆಗೆ
ಬಳಸುವ ನೀರಿನ ಮೂಲದ ಬಗ್ಗೆ
ಹೇಳಬೇಕೆಂದಿರುವೆ.ನಮ್ಮ ಮನೆಯಲ್ಲಿ ಬಾವಿ
ಇಲ್ಲ,ಬದಲಾಗಿ ಒಂದು ಸಣ್ಣ
ಕೆರೆ ಇದೆ . ನಮ್ಮ ತೋಟದಲ್ಲಿನ
ಕೆರೆಗೆ 18 ಮನೆಯವರು ನೀರಿಗೆ ಬರುತ್ತಿದ್ದರು.
ಮಂಜಾನೆ 5 ಘಂಟೆಗೆ ಕಿರ್ …ಕಿರ್
…ಅಂತ ರಾಟೆಯ ಶಬ್ದ ಕೇಳುತ್ತಿತ್ತು
.ಬಟ್ಟೆ ಒಗೆಯಲು ,ಯಾವುದೇ ಶುಭ ಸಮಾರಂಭಗಳಿಗೆ
,ದಿನದ ದಿನಚರಿಗೆ ನಮ್ಮ ಮನೆಯ ಕೆರೆಯ
ನೀರೆ ಬಳಕೆಯಾಗುತ್ತಿತ್ತು . ಈಗ ಗ್ರಾಮ ಪಂಚಾಯತ್
ನಿಂದ ನೀರಿನ ಸೌಲಭ್ಯ ಬಂದರೂ
ಕುಡಿಯುವುದಕ್ಕೆ ನಮ್ಮ ಕೆರೆಯ ನೀರೆ
ಬೇಕು .ಎರಡು ವರ್ಷಗಳ ಹಿಂದೆ
ನಮ್ಮ ಕೆರೆಯ ಹತ್ತಿರ ಸಾಯಂಕಾಲದ
ಹೊತ್ತಿನಲ್ಲಿ ಜನ ಸಮೂಹ ಇರುತ್ತಿತ್ತು
. ನಮ್ಮ ಮನೆಯ ಎದುರು ಭಾಗದಲ್ಲಿ
ಕೆರೆ ಇದ್ದ ಕಾರಣ ಎಲ್ಲರೂ
ಕರೆದು ಮಾತಾಡುತ್ತಿದ್ದರು.ಕೆಲವೊಮ್ಮೆ ಕಿರಿ ಕಿರಿ ಆದಾಗ
ನಾವು ಮನೆಯೊಳಗೆ ಬಾಗಿಲು ಹಾಕಿ ಕೂತದ್ದು
ಉಂಟು .
october-2015 |
ಪಂಚಾಯತ್ ನ ಕುಡಿಯುವ
ನೀರಿನ ಯೋಜನೆ ಬಂದ ಮೇಲೆ
ಸರದಿ ಸಾಲಲ್ಲಿ ಬಂದು ನೀರು
ಕೊಂಡುಹೋಗುವ ಪ್ರಮೇಯ ಇಲ್ಲ.ಈ
ಕೆರೆಯನ್ನು ನನ್ನ ತಂದೆ ಪರಿಶ್ರಮದಿಂದ
ಮಾಡಿದ್ದಾರೆ .ಯಾವುದೇ ತಂತ್ರಜ್ಞಾನ ಬಳಸಿಲ್ಲ.ಮೊದಲು ಇಲ್ಲಿ ಸಣ್ಣದಾಗಿ ಒರತೆ ಬಂದು ನೀರು ನಿಲ್ಲುತ್ತಿತ್ತು
ಬಳಿಕ ಮಾಯವಾಯಿತು. ಅದಕ್ಕಾಗಿ ಗುಂಡಿ ಮಾಡಬೇಕಾಯಿತು ಎನ್ನುತ್ತಾರೆ
ನನ್ನ ತಂದೆ .ಕುಮಾರಧಾರ ನದಿ
ಹತ್ತು ಕಿ.ಮೀ ದೂರದಲ್ಲಿದೆ.ಮಳೆಗಾಲದಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕೆಂಪು
ನೀರು ಬಂದಾಗ ಮನೆಯ ಕೆರೆಯ
ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ.ನಮ್ಮ ಮನೆ ಇರುವುದು
ಇಳಿಜಾರು ಜಾಗದಲ್ಲಿ, ಸುತ್ತ ಮುತ್ತ ಅಡಕೆ
ತೋಟ,ನೆರೆಮನೆಯವರ ರಬ್ಬರ್ ತೋಟವೂ ಇದೆ.ನಮ್ಮ ದೊಡ್ಡಪ್ಪನ ಮನೆ
ಕೂಗಳತೆಯ ದೂರದಲ್ಲಿದೆ .ಅಲ್ಲಿ ಅವರು ಎರಡು
ಕೆರೆಗಳನ್ನು ನಿರ್ಮಿಸಿದ್ದಾರೆ. ಆದರೆ ಮಳೆಗಾಲ ಹೊರತು
ಪಡಿಸಿ ಉಳಿದ ಸಮಯದಲ್ಲಿ ಆ
ಎರಡು ಕೆರೆಗಳಲ್ಲಿ ನೀರು ಇರುವುದಿಲ್ಲ!
may-2016 |
ನಮ್ಮ ಕೆರೆಯ ನೂರು ಮೀಟರ್
ದೂರದಲ್ಲಿ ಎರಡು ಸರ್ಕಾರಿ ಕೊಳವೆ
ಬಾವಿ ಇದ್ದು ಒಂದರಲ್ಲಿ ಮಾತ್ರ
ನೀರು ಲಭ್ಯವಿದೆ.ಯಾವತ್ತು ವರ್ಷಪೂರ್ತಿ ನೀರು
ಕೊಡುತ್ತಿದ್ದ ನಮ್ಮ ಕೆರೆ ಈ
ಬಾರಿ ಮಾತ್ರ ಕೆಸರು ನೀರು
ಕೊಟ್ಟಿದೆ. ಅರುವತ್ತು ವರ್ಷ ಹಳೆಯದಾದ ಕೆರೆಯಲ್ಲಿ
ಮೊದಲ ಬಾರಿ ಕೆಸರುಮಯ ಕೆರೆಯಾಗಿದೆ
ಎನ್ನುವುದು ನನ್ನ ತಂದೆಯ ಅನುಭವದ
ಮಾತು.ಆದರೆ ಈ ಬಾರಿ
ಒಂದೇ ಕೆರೆಯಲ್ಲಿ ಎರಡು ಪಂಪ್ ಸೆಟ್
ಜೋಡಿಸಲಾಗಿದೆ.ಆ ಕಾರಣಕ್ಕಾಗಿ ಕೆರೆಯ
ತಳ ಕಂಡಿರಬಹುದು . ಮೊನ್ನೆ ಕೆರೆಯಲ್ಲಿ ಇದ್ದ
ಕೆಸರನ್ನು ಮೇಲೆತ್ತಲಾಗಿದೆ.ಈ ಕೆರೆಯಿಂದ ಯಾರೆಲ್ಲ
ನೀರು ತೆಗೆದುಕೊಂಡು ಹೋಗುತ್ತಾರೊ ಅವರೆಲ್ಲರೂ ಬಾರದಿದ್ದರೂ ಕೆಲವರು ಕೈ ಜೋಡಿಸಿದ್ದಾರೆ.ಮೊನ್ನೆ ಕೆಸರಿನಡಿಯಲ್ಲಿ ಐದು
ಕೊಡಪಾನ ಬೇರೆ ಸಿಕ್ಕಿದೆ!! ಈಗ
ಮತ್ತೆ ನೀರಿನ ಮಟ್ಟ ಒಂದೇ
ಸಮನೆ ಏರತೊಡಗಿದೆ.ಈ ವರ್ಷದಿಂದ ಕೆರೆಯ
ಸುತ್ತಮುತ್ತ ಇಂಗು ಗುಂಡಿ ಮಾಡುವ
ಯೋಜನೆ ಹಾಕಿಕೊಳ್ಳಲಾಗಿದೆ . ಊರಿಗೆಲ್ಲ ಪಂಚಾಯತ್ ಒದಗಿಸಿದ ನೀರು
ಬಂದರೂ ನಾವು ನಳ್ಳಿ ಹಾಕಿಸಿಕೊಂಡಿಲ್ಲ
.ಮನೆಯ ಕೆರೆ ವರ್ಷಪೂರ್ತಿ ನೀರು
ಕೊಡುವ -ಅಕ್ಷಯ ಪಾತ್ರೆ ಎಂದರೆ
ತಪ್ಪಾಗಲಾರದು.-ವಿ.ಕೆ ಕಡಬ
No comments:
Post a Comment