Thursday, April 21, 2016

ಹಕ್ಕಿಗಳಿಗಾಗಿ ಕ್ಯಾಂಪಸ್ ನಲ್ಲಿ ಮಡಿಕೆ ನೀರು !

ನೀರು ಭೂಮಿಯಲ್ಲಿ ಬದುಕುವ ಎಲ್ಲಾ ಜೀವ ಸಂಕುಲಗಳಿಗೂ ಬೇಕು .ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುವ ಈ ಸಮಯದಲ್ಲಿ ನಿರೀನ ಅಭಾವವೂ ಕಾಡುತ್ತಿದೆ . ಸುತ್ತಮುತ್ತಲಿನ ನದಿ, ಕೆರೆ ,ಬಾವಿಗಳು ಬತ್ತಿ ಹೋಗಿವೆ  ನೀರಿಗಾಗಿ ಜನ ಮೈಲುಗಟ್ಟಲೆ ಹುಡುಕುತ್ತಾ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ . ಸಾಕು ಪ್ರಾಣಿಗಳು ಕೆಸರು ತುಂಬಿದ ಹಳ್ಳ ಕೆರೆಗಳಲ್ಲಿ ದಾಹ ತೀರಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿ ನೋಡಲು ಸಿಗುತ್ತಿದೆ  ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿ   ಹಕ್ಕಿಗಳಿಗೆ ತಮ್ಮ ಬಾಯಾರಿಕೆ ನೀಗಿಸಿ ಕೊಳ್ಳಲು ಪಾತ್ರೆಯಲ್ಲಿ ನೀರನ್ನು ಹೊರಗೆ ಇಡುವಂತೆ ಮನವಿ ಮಾಡಲಾಗಿತ್ತು .ಬಹುತೇಕ ಕಡೆಗಳಲ್ಲಿ ಪರಿಸರ ಪ್ರೇಮಿಗಳು ,ಸಾಮಾಜಿಕ ಕಳಕಳಿ ಉಳ್ಳ ಜನರು ತಮ್ಮ  ವ್ಯಾಪ್ತಿಯಲ್ಲಿ ಪಾತ್ರೆಯಲ್ಲಿ ನೀರು ಇಡುವ ಪ್ರಯತ್ನವನ್ನು ಮಾಡಿದ್ದಾರೆ . ಇದಕ್ಕೆ ಪೂರಕವಾಗಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಕ್ಯಾಂಪಸ್ ನಲ್ಲಿ ಹಕ್ಕಿಗಳಿಗಾಗಿ ಎರಡು ಕಡೆಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಇಡಲಾಗಿದೆ . ಪ್ರತಿ  ದಿನವೂ ಕಾಲೇಜಿನ ನಿರ್ವಹಣೆ ವಿಭಾಗದ ಸಿಬ್ಬಂದಿ ಬಂದು ಪಾತ್ರೆಯನ್ನು ಸ್ವಚ್ಛ ಗೊಳಿಸಿ ನೀರನ್ನು ತುಂಬಿಸುತ್ತಾರೆ  .ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ದಿನ ಗಮನ ಹರಿಸುತ್ತಾರೆ . ಶಿಕ್ಷಣ ಸಂಸ್ಥೆಗಳಲ್ಲಿ ಮಾನವೀಯತೆ ತೋರುವ ಮೂಲಕ  ಮೂಕ ಪಕ್ಷಿಗಳ ಮೇಲೆ ಕರುಣೆ ತೋರಿಸಿರುವುದು ಮಾನವೀಯ ಗುಣವು ಹೌದು.
ಕಾಲೇಜಿನ ಆವರಣದಲ್ಲಿ ನೀರಿನ ಪಾತ್ರೆ 
  ಸಾಮಾನ್ಯವಾಗಿ ಗುಬ್ಬಿ ,ಕಾಗೆ ,ಗಿಡುಗ ,ಕೋಗಿಲೆ ,ಬಾನಕ್ಕಿ ಸೇರಿದಂತೆ ಎಲ್ಲಾ ಬಗೆಯ ಹಕ್ಕಿಗಳು ನೀರು ಕುಡಿಯಲು ಬರುತ್ತಿವೆ . ಮೊನ್ನೆ ಸಣ್ಣ ಹಕ್ಕಿಯೊಂದು ನೀರಿರುವ ಪಾತ್ರೆಯೊಳಗೆ ಮುಳುಗಿ ಏಳುತ್ತಿತ್ತು . ಬಹುಶ : ಅದಕ್ಕೂ ಈ ಉರಿ ಬಿಸಿಲನ್ನು ತಡೆಯಲಾಗುತ್ತಿಲ್ಲವನೋ ತಿಳಿಯದು . ನೀರಿನ ಜೊತೆಗೆ ಕಾಳು  ಚೆಲ್ಲಿ ಬಿಟ್ಟರೆ ಹಕ್ಕಿಗಳಿಗೆ ಆಹಾರ ಬೇಗ ಸಿಗಬಹುದು . ಗ್ರಾಮೀಣ ಭಾಗದಲ್ಲಿ ನೀರು ಇಡುವ ಅವಶ್ಯಕತೆ ಸಧ್ಯಕ್ಕೆ ಇಲ್ಲದಿದ್ದರೂ ನಗರ ಭಾಗದಲ್ಲಂತೂ ಬೇಕೆ ಬೇಕು . ಶಿಕ್ಷಣ ಸಂಸ್ಥೆ ಗಳಲ್ಲಿ ಖಾಸಗಿ ಕಚೀರಿಗಳಲ್ಲಿ ಹಕ್ಕಿಗಳಿಗೆ ಅನುಕೂಲವಾಗುವಂತೆ ನೀರಿಟ್ಟರೆ ಒಳ್ಳೆಯದು .ಹಕ್ಕಿಗಳು ನೀರಿಗಾಗಿ ಹುಡುಕಿಕೊಂಡು ಬಹು ದೂರದ ವರೆಗೆ ಸಾಗುತ್ತವೆ . ಆದರೆ ಹೆಚ್ಚಾಗಿ ಜನರು ಓಡಾಡುವ ಜಾಗದಲ್ಲಿ ನೀರಿದ್ದರೆ ಅಲ್ಲೇ ಬಂದು ನೀರು ಕುಡಿಯುವ ಅಭ್ಯಾಸವನ್ನೂ ಮಾಡುತ್ತದೆ. ಕಳೆದ ಎರಡು ದಿನಗಳ ಹಿಂದೆ ಬಾವುಟ ಗುಡ್ದೆಯಲ್ಲಿರುವ ಕೇಂದ್ರ ಗ್ರಂಥಾಲಯದ ಸಮೀಪ ದೊಡ್ಡ ಗಾತ್ರದ ಗಿಡುಗ ಸತ್ತು ಬಿದ್ದಿದೆ . ದಿನಾ ಎತ್ತರದಲ್ಲೇ ಹಾರಾಡುವ ಗಿಡುಗ ಹೇಗೆ ಸತ್ತಿತ್ತು ಎಂಬುದು ನಿಗೂಢ ಆದರೂ ಮೇಲ್ನೊಟಕ್ಕೆ ನೀರಿಲ್ಲದೆ ಉರಿಬಿಸಿಲಿಗೆ ತನ್ನ ಪ್ರಾಣ ಕಳೆದುಕೊಂಡಿರಲೂಬಹುದು .
ಪಾತ್ರೆಯನ್ನು ಸ್ವಚ್ಛ ಮಾಡುತ್ತಿರುವ ಪುಷ್ಪರಾಜ್ 
ರಾಷ್ಟ್ರ ಕವಿ ಕುವೆಂಪು ತಮ್ಮ ಕವನವೊಂದರಲ್ಲಿ 
"ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!
ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು! ಅಂತ ಬರೆಯುತ್ತಾರೆ . ಆ ಕಾಲಘಟ್ಟಕ್ಕೆ ನೀರಿನ ತೊರೆ ,ಹಕ್ಕಿಗಳ ಹಿಂಡು  ಎಲ್ಲವೂ ಇತ್ತು  ಆದರೆ ವಾಸ್ತವದಲ್ಲಿ ಈಗ ಕಾಣಲು ಸಾಧ್ಯವಿಲ್ಲ . ಹಕ್ಕಿಗಳ ಕೂಗು ಎಲ್ಲೊ ದೂರದಿ೦ದ ಕೇಳುತ್ತದೆ ಹೊರತು ಹಕ್ಕಿಗಳು ಕಾಣಲು ಸಿಗುವುದಿಲ್ಲ!


ನಮ್ಮಂತೆ  ಬದುಕುವ ಇತರ ಪ್ರಾಣಿ ಪಕ್ಷಿಗಳಿಗೂ ನಾವು ನೀರು ಆಹಾರ ನಿಡೋಣ .

ದೊಡ್ಡ ಗಾತ್ರದ ಗಿಡುಗ ಸತ್ತು ಬಿದ್ದಿರುವುದು 










No comments:

Post a Comment