ಶಾಲೆ-ಕಾಲೇಜಿಗೆ ರಜೆ ಸಿಕ್ಕಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ .ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದರೂ ನೀರಿನಲ್ಲಿ ಕಸರತ್ತು ಮಾಡುವುದಕ್ಕೆ ಎಲ್ಲರೂ ರಡಿ ಇರುತ್ತಾರೆ . ತಮ್ಮ ಮನೆ ಅಥವಾ ಸಂಬಂಧಿಕರ ಪರಿಸರದಲ್ಲಿ ಹರಿಯುವ ನದಿ, ಕಾಲುವೆ, ಹೊಳೆ,ಕೆರೆ ಸಿಕ್ಕಿದರೆ ಮೋಜಿನಿಂದ ಈಜಲು ಅಥವಾ ನೀರಿನಲ್ಲಿ ಆಟವಾಡಲು ಹೋಗುವುದು ಮಾಮೂಲಿ . ಆದರೆ ಕೆಲವೊಮ್ಮೆ ಗುಂಡಿಯಲ್ಲಿ ಬಿದ್ದು ಆಯ ತಪ್ಪಿ ಹೀಗೆ ವಿವಿಧ ಕಾರಣಗಳಿಂದ ನೀರಿನಲ್ಲಿ ಮುಳುಗಿ ಅನೇಕರು ಸಾವನ್ನಪ್ಪುತ್ತಿರುವ ವಿಚಾರ ಆಗಾಗ ಸುದ್ದಿಯಾಗುತ್ತಿದೆ .ಮುಖ್ಯವಾಗಿ ಹೊಸದಾಗಿ ಈಜಲು ಹೋಗಿ ಕಲಿತವರು ಹರಿಯುವ ನೀರಿನಲ್ಲಿ ಈಜಲು ಹೋಗಿ ನೀರಿನ ರಭಸಕ್ಕೆ ತೇಲಿ ಹೋಗಿರುವ ಘಟನೆಗಳು ಈಗ ಹೆಚ್ಚಾಗುತ್ತಿವೆ .ಈಜು ದೇಹಕ್ಕೆ ಒಂದು ಒಳ್ಳೆಯ ವ್ಯಾಯಾಮವಾದರೂ ಈಜಾಡುವಾಗ ಕಸರತ್ತು ಮಾಡುವುದು ಬೇಡ. ಇನ್ನು ಈಜು ಕಲಿಯುವ ಹಂತದಲ್ಲಿರುವವರು,ವಿದ್ಯಾರ್ಥಿಗಳು, ಯುವಕರು, ಏಕಾಏಕಿ ನೀರಿಗೆ ಹಾರಿ ತನ್ನ ಸಾಮರ್ಥ್ಯವನ್ನು ಇತರರ ಎದುರಿಗೆ ಪ್ರದರ್ಶಿಸುವುದು ಸರಿಯಲ್ಲ. ಅನುಭವಿ ಈಜು ಕಲಿತವರೊಂದಿಗೆ ಕಲಿತರೆ ಹೆಚ್ಚು ಭದ್ರತೆ ಮತ್ತು ಅನುಕೂಲವಾದೀತು.
ಇಂದಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಈಜಿದರೂ ನೀರಿನಲ್ಲಿ ಈಜಲು ಬರುವುದಿಲ್ಲ! ನಿತ್ಯ ಬದುಕಿನಲ್ಲಿ ಬದುಕಲು ಕಷ್ಟವಾಗುತ್ತಿದೆ. ಹೊಳೆಯಲ್ಲಿ ಗುಂಪಿನಲ್ಲಿ ಈಜುವಾಗ ಹೆಚ್ಚಾಗಿ ಪೈಪೋಟಿ ನಡೆಯುವುದುಂಟು.ಅವನಿಗಿಂತ/ಅವಳಿಗಿಂತ ಮುಂದೆ ಹೋಗಬೇಕು.ಇನ್ನೊಂದು ದಡವನ್ನು ಸೇರಿ ಗುರುತಿಸಿಕೊಳ್ಳಬೇಕು ಎಂದು. ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ. ನಾನು ನೋಡಿದ ಹಾಗೆ ಕೆಲವರು ಹೊಳೆಯ ದಡದ ಬಂಡೆ ಕಲ್ಲಿನ ಮೇಲೆ ನಿಂತು ಉಲ್ಟಾ ಹಾರುತ್ತಾರೆ. ಎತ್ತರದಿಂದ ಧುಮುಕುವಾಗ ಅಡಿ ಭಾಗದಲ್ಲಿ ಕಲ್ಲು ಇದ್ದರೆ ತಲೆಗೆ ಅಥವಾ ಕೈ ಗೆ ಪೆಟ್ಟು ಆಗುವ ಅವಕಾಶ ಜಾಸ್ತಿ ಇರುತ್ತದೆ. ಹಳ್ಳಿ ವಾತಾವರಣದಲ್ಲಿ ಬೆಳೆದ ಮಕ್ಕಳು ಹೆಚ್ಚಾಗಿ ಈಜು ಗೊತ್ತಿರುವವರೇ ಆಗಿರುತ್ತಾರೆ. ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಈ ರೀತಿ ನಿರೀಕ್ಷೆ ಮಾಡಲಾಗದು .ಈಗೀಗ ಶಾಲಾ ಆವರಣದಲ್ಲಿ, ಹೊಸದಾಗಿ ನಿರ್ಮಾಣವಾಗಿರುವ ಫ಼್ಲಾಟ್ ಗಳಲ್ಲಿ ಈಜುಕೊಳ ಇದ್ದೇ ಇದೆ.

This comment has been removed by the author.
ReplyDelete